ಹಾಗೇ ಸುಮ್ಮನೇ..


  • ಜೀವ 


ಪ್ರೀತಿ ಸತ್ತ ಮೇಲೆ.... ಮನವು ಬದುಕಬಲ್ಲದು
 ಆದರೆ ತಿರುಗಿ ಬಾಳಬಲ್ಲದೇ........??
ಬದುಕು ಸೋತ ಮೇಲೆ.... ಜೀವ ಉಳಿಯಬಲ್ಲದು
 ಆದರೆ ಮತ್ತೆ ಗೆಲ್ಲಬಲ್ಲದೇ......??
ಕನಸು ಕಳೆದ ಮೇಲೆ.... ಚಿತ್ರ ಕಾಣಬಲ್ಲದು
 ಆದರೆ ಬಣ್ಣ ಉಳಿಯಬಲ್ಲದೇ.........??
ಮನಸು ಮುರಿದ ಮೇಲೆ.... ಪ್ರೀತಿ ಚಿಗುರಬಲ್ಲದು
 ಆದರೆ ಭಾವ ಮೂಡಬಲ್ಲದೇ........??
                
                            -ಅಮರ್