Thursday, January 20, 2011

ಪರಿಚಯ



"ಮಾಯದ ಕನಸಿಗೆ ಸುಳ್ಳು  ನೆನಪಿನ  ಪರಿಚಯ"
"ಗಾಯದ ಮನಸಿಗೆ ಕಳ್ಳ  ಹೃದಯದ ಪರಿಚಯ"


"ಖಾಲಿ ಕೈಗಳಿಗೆ ಹೊಸ ತುಡಿತಗಳ ಪರಿಚಯ "
"ಒಂಟಿ ಬಾಳಲ್ಲಿ ಪ್ರೀತಿಯೆಂಬ ಮುತ್ತಿನ ಪರಿಚಯ "


"ಹಾಯಾದ ದಾರಿಗೆ ಮರೆತ ಸಮಯದ ಪರಿಚಯ "
"ನೋವಾದ ಹೃದಯಕ್ಕೆ ನಲ್ಮೆಯ ಮೊಗದ ಪರಿಚಯ"


"ಹಳೆಯ ನೆನಪುಗಳಿಗೆ ಜೊತೆಯಾದ ಕೈಗಳ ಪರಿಚಯ "
"ಸಾಯದ ಪ್ರೀತಿಗೆ ಬೇಡದ ಸಾಂತ್ವನದ ಪರಿಚಯ"

Sunday, January 9, 2011

ನಾವು ಮತ್ತು ನಮ್ಮ ನಡವಳಿಕೆ

ಮಾನವತ್ವದ ಗುಣಗಳು ಹೇಗಿವೆಯೆಂದರೆ ಒಂದನ್ನು ವಿಸ್ತರಿಸಲು ಹೋದರೆ ಹಲವಾರು ವಿಚಾರಗಳು ಅದರ ನಡುವೆಯೇ ವಿಸ್ತರಿಸಲ್ಪಡುತ್ತವೆ...
ಅದೇ ರೀತಿ ಈ ಬರಹದಲ್ಲೂ ಹಲವಾರು ವಿಚಾರಗಳು ಅಡಗಿವೆ ಮತ್ತು ಅದನ್ನು ನನ್ನ ಮಟ್ಟಿಗೆ ಸಾದ್ಯವಾದಷ್ಟು , ತಿಳಿದಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದೇನೆ.....


ಪ್ರತಿಯೊಂದು ಮನುಷ್ಯನಲ್ಲೂ ಕೆಲವು ಭಾವೊದ್ವೇಗಗಳಿರುತ್ತವೆ. ಅದರಲ್ಲೂ ಒಂದು ಮುಖ್ಯವಾದ ಸಂಗತಿಯೆಂದರೆ ಯಾರಾದರೂ ತಮ್ಮ ಕೆಲಸಗಳಲ್ಲಿ ಅಡ್ಡಗಲ್ಲಾಗಿ ನಿಲ್ಲುವುದೋ ಇಲ್ಲವೇ , ತಮ್ಮ ಕೆಲಸಗಳನ್ನು ಆಡ್ಡಿಪಡಿಸಲು ಯಾರಾದರೂ ಬಂದಾಗ ತೀವ್ರವಾಗಿ ಹತಾಶರಾಗಿ ತಮ್ಮ ಕೆಲಸಗಳನ್ನು ಮುಂದುವರೆಸಲು ಆಗದೆ ತಮ್ಮನ್ನು ತಾವೇ ಆತ್ಮಹತ್ಯೆಯಂತಹ ಶಿಕ್ಷೆಗಳಿಗೆ ಬಲಿಪಶುಗಳಾಗುವುದು.


ಮುಖ್ಯವಾಗಿ ಹೆಚ್ಚಿನ ಜನರು ತಮಗೆ ಅಡ್ಡಗಲಾಗಿ ಬಂದವರನ್ನು ಎದುರಿಸಲಾಗದೆ ತಮ್ಮ  ಪ್ರಯತ್ನವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ. ಇದು ಉದಯೊನ್ಮುಕ ವ್ಯಕ್ತಿತ್ವಗಳಿಗೆ ತಕ್ಕುದಾದ ನಡೆಯಲ್ಲ....ಹೆಚ್ಚಿನವರು ತಮ್ಮ ಕೆಲಸಗಳಲ್ಲಿ ಅಡ್ಡಿಯಾಗುವವರು ಯಾವ ಕಾರಣದಿಂದಾಗಿ ಅಡ್ಡಿಯಾಗುತ್ತಿದ್ದಾರೆ ಮತ್ತು ಅದರಿಂದ ಹೇಗೆ ದೂರವಿರಬಹುದು ಎಂಬುದಾಗಿ ಯೋಚಿಸುವುದನ್ನು ಬಿಟ್ಟು ಉದ್ವೇಗಕ್ಕೆ ಒಳಗಾಗಿ ಭಾವನಾತ್ಮಕ ತುಲನೆಗಳಿಗೆ ಒಳಪಟ್ಟು ದುಃಖಕ್ಕೀಡಾಗುತ್ತಿದ್ದಾರೆ.


ಎಲ್ಲರೂ ಯೋಚಿಸಲಾಗದ ಒಂದು ಸತ್ಯವೆಂದರೆ "No stones are thrown on a fruitless tree" ಅಂದರೆ
ಫಲವಿಲ್ಲದ ಮರಕ್ಕೆ ಎಂತಹ ಮೂರ್ಖನೂ ಸಹ ಕಲ್ಲನ್ನು ಎಸೆಯುವುದಿಲ್ಲ. ನೀವು ಮಾಡುವ ಕೆಲಸಗಳಿಗೆ ಯಾರಾದರೂ ಅಡ್ಡಿಯಾಗುತ್ತಿದ್ದಾರೆಂದರೆ ನೀವು ಫಲದಿಂದ ತುಂಬಿರುವ ಮರವಿದ್ದಂತೆ  ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಕೆಲಸಗಳಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಕಾರ್ಯೋನ್ಮಕವಾಗಬೇಕು. ಆಗ ವೇಗವಾಗಿ ಓಡುವ ಕುದುರೆಗೆ ಕಲ್ಲೆಸೆದರೆ ಹೇಗೆ ಕುದುರೆಗೆ ತಾಗುವುದಿಲ್ಲವೋ ಹಾಗೆಯೆ ನಿಮಗೆ ಅಡ್ಡಗಾಲಾಗಿ ಬರುವವರು ನಿಮ್ಮ ಪ್ರಯತ್ನದ ಮುಂದೆ ತೄಣವಾಗಿ ಕಾಣುತ್ತಾರೆ.


ಜೀವನವೆಂಬುದು ಬಹುದೊಡ್ಡ ಪ್ರಯಾಣವಿದ್ದಂತೆ, ಯಾವ ವ್ಯಕ್ತಿಯೂ ಸಹ ಜೀವನದ ಭೂಪಟವನ್ನು ಹೊಂದಿರುವುದಿಲ್ಲ. ಆದ್ದರಿಂದ ನಾವು ನಮ್ಮದೇ ಆದಂತಹ ದಾರಿಗಳಲ್ಲಿ ನಡೆದು ನಮ್ಮ ಗುರಿಯನ್ನು ತಲುಪಬೇಕು. ನಮ್ಮ ದಾರಿಗಳನ್ನು ನಾವೇ ಹುಡುಕಿಕೊಂಡು ಬೇರೆಯವರ ದಾರಿಯಲ್ಲಿ ನಾವು ನಡೆಯದ್ದಿದ್ದಾಗ ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ.ಆಗ ನಮಗೆ ಯಾರೂ ಸಹ ಅಡ್ಡಗಾಲಾಗಿ ಬರುವ ಪ್ರಮೇಯಗಳಿರುವುದಿಲ್ಲ..


ಆದರೆ ಅಂತಹ ದಾರಿಗಳನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹ ಸಮಯದಲ್ಲಿ ನಮ್ಮ ಉದಯೋನ್ಮುಖ  ಹೋರಾಟ ನಮ್ಮ ಸ್ವಾಭಿಮಾನದಿಂದಲ್ಲ , ನಮ್ಮ ಮನಸ್ಸಿನಿಂದ.... ನಮ್ಮ ಹೊರಾಟದಲ್ಲಿ ನಮ್ಮ ದಾರಿಗೆ ಅಡ್ಡಗಲಾಗಿ ಬರುವ ಶತ್ರುವಿಗೂ ನೋವಾಗದಂತೆ ನಮ್ಮ ಹೋರಾಟ ಮುಂದುವರೆದಾಗ ನಮ್ಮ ದಾರಿಗೆ ಅಡ್ಡಬರುವವರಿಗೂ ಕೂಡ ಭಾವನಾತ್ಮಕ ತುಲನೆಗಳು ಕಾಡುತ್ತವೆ..,, ಆಗ ಯಾರೂ ಸಹ ನಮ್ಮ ದಾರಿಗೆ ಅಡ್ಡಬರುವುದಿಲ್ಲ....


ನಾವು ನಮ್ಮ ಜೀವನದಲ್ಲಿ ಒಂದು ಮಾತನ್ನು ನೆನಪಿನಲ್ಲಿಡುವುದು ಅವಶ್ಯವಾಗಿದೆ ಅದೇನೆಂದರೆ..., "if we can't find the brighter side in life , then polish the darker side....!!" ಅಂದರೆ ಜೀವನದಲ್ಲಿ ಬೆಳಕನ್ನು ಕಾಣದ್ದಿದ್ದಾಗ ಕತ್ತಲೆಯಲ್ಲಿಯೇ ಬೆಳಕನ್ನು ಕಾಣಲು ಪ್ರಯತ್ನಿಸಬೇಕು. ಬೆಳಕು ಕತ್ತಲೆಯಲ್ಲಿಯೇ ಹೆಚ್ಚು ಪ್ರಖರವಾಗಿರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಂಡಾಗ ನಮ್ಮ ಸ್ಥಾನ , ನಮ್ಮ ಶಕ್ತಿ ನಮಗೆ ಅರಿವಾಗುತ್ತದೆ.......

                                                                              - Amar $hereddy

Saturday, January 1, 2011

ಜೀವನ ಅನರ್ಥವೇ.....??



ಜೀವನ ಅನರ್ಥವೇ ಎನ್ನುವ ಪ್ರಶ್ನೆಗೆ ಉತ್ತರ ದೊರಕುವುದು ಅಷ್ಟು ಸುಲಭದ ಮಾತಲ್ಲ......!!
ಕೆಲವರು ತಮಗೆ ತಿಳಿದ ಉತ್ತರವನ್ನು ಕೊಡಬಹುದು ಆದರೇ.......??
ಉತ್ತರ ನೀಡುವವರು ತಮ್ಮ ಆತ್ಮಸಾಕ್ಷ್ಶಿಗೆ ತಕ್ಕ ಉತ್ತರ ನೀಡಲಾರರು.......!!
ಜೀವನ ಒಂದು ಸಾಗರವಿದ್ದಂತೆ ಅದಕ್ಕೆ ಎಷ್ಟೇ ನದಿಗಳ ಸಿಹಿ ನೀರು ಸೇರಿದರೂ ಅದು ಉಪ್ಪೇ...!!
.
ನಾವು ನಮ್ಮ ಜೀವನದಲ್ಲಿ ಎಷ್ಟೇ ಸುಖದಿಂದ ಬಾಳಿದರೂ ಕೆಲವು ಮರೆಯಲಾಗದ ಕಹಿ ನೆನಪುಗಳು
ನಮ್ಮನ್ನು ಕಾಡುತಿರುತ್ತವೆ.... ಆ ಕಹಿ ನೆನಪುಗಳು ನಮ್ಮ ಜೀವನದ ಅಮೂಲ್ಯವಾದ ಸಿಹಿ ಕ್ಷಣಗಳನ್ನು
ನುಂಗಿ ಹಾಕುತ್ತವೆ...!! ಆ ಕಹಿ ನೆನಪುಗಳಲ್ಲಿ ನಮ್ಮ ಸಿಹಿ ಕ್ಷಣಗಳನ್ನು ಮರೆಯುತ್ತೇವೆ.....!!
ನಮ್ಮ ಜೀವನವನ್ನು ಹಾಳು ಮಾಡಿಕೊಳ್ತೆವೆ......!!
.
ನಾವು ಬಾಳುವ ಜೀವನಕ್ಕೆ ಒಂದು ಅರ್ಥವಿರಬೇಕು......!!
ನಮ್ಮ ಜೀವನದಲ್ಲಿ ಎಷ್ಟೋ ಅನರ್ಥ ವಿಷಯಗಳು ಇರಬಹುದು ಆದರೇ ಜೀವನವೇ ಅನರ್ಥವೆಂದು
ಹೇಳಲು ಆಗದು.........!!
ಕೆಲವರು ಹೇಳಬಹುದು " ಹಾಲಿನಲ್ಲಿ ಒಂದು ಹನಿ ವಿಷ ಸೇರಿದರೆ ಹಾಲೂ ಕೂಡ ವಿಷವಾಗುತ್ತೆ" ಎಂದು
ಅದೇ ರೀತಿ ನಮ್ಮ ಬಾಳು ಕೂಡ ಅನರ್ಥವಾಗುತ್ತೆ ಅಂತ.......!!
ಆದರೇ ನಮ್ಮ ಮನಸೆಂಬ ಹಾಲು ವಿಷಕ್ಕಿಂತ ಶಕ್ತಿಯುತವಾದುದು.....!! ಅದು ಎಷ್ಟೋ ಪವಿತ್ರವಾದುದು
ಕೂಡ...!!
.
ಕೆಲವು ಸಣ್ಣ ಕಾರಣಗಳಿಂದ ನಮ್ಮ ಜೀವನ ಅರ್ಥ ಕಳೆದುಕೊಳ್ಳುವುದಿಲ್ಲ....!!
ನಮ್ಮ ಜೀವನಕ್ಕೆ ಅರ್ಥವನ್ನು ತುಂಬಬೇಕು... ಕೇವಲ ಕೆಲವು ಅನರ್ಥಗಳಿಂದ ಜೀವ ಕಳೆದುಕೊಂಡರೆ
ಮರಳಿಬಾರದು.....!!
ಅನರ್ಥಗಳಿಂದ ಜೀವ ಮತ್ತು ಜೀವನ ನಂದಿ ಹೋಗಬಾರದು......!!