ಓ ಮನವೇ.

 • ಪ್ರೀತಿಯೆಂಬ ಗಿಡ ನಾಟಿದಾಗ ಮಾತ್ರ ಚಿಗುರುತ್ತದೆ.....!!
ಮನಸ್ಸು ಎಂಬ ಹೂವು ಬಯಸಿದಾಗ ಮಾತ್ರ ಅರಳುತ್ತದೆ......!!

 • ಮನಸ್ಸಿಗೆ ಗೆಲುವು ಇದ್ದಾಗ ಪ್ರೀತಿಗೆ ನಿಲುವು ಇರೊಲ್ಲ....!!
ಪ್ರೀತಿಗೆ ಗೆಲುವು ಇದ್ದಾಗ ಮನಸ್ಸಿಗೆ ನಿಲುವು ಇರೊಲ್ಲ......!!
  ಈ ಎರಡೂ ಗೆಲ್ಲಬೇಕಂದ್ರೆ ನಾವೇ ಇರೊಲ್ಲ.......!!


  • ಕನಸೆಂಬ ಮಾಯೆಯ ಹಿಡಿದು
  ನಿನ್ನಲ್ಲಿ ಬಂದಾಗ...
  ಮನಸೆಂಬ ಹೂವನು ಹಿಡಿದು
  ನಿನ್ನೆದುರಲ್ಲಿ ನಿಂತಾಗ....
  ನೀ ಎಸೆದ ಕಲ್ಲಿಗೆ ಹೃದಯವೆಂಬ
  ಗಾಜು ಚೂರಯಿತು....!!


  • ನೀನಿಲ್ಲದೆ ಈ ಮನವಿಲ್ಲ
  ನಿನ್ನನ್ನೆನೆಯದ ದಿನವಿಲ್ಲ
  ನೀ ಇರದ ಕನಸಿಲ್ಲ
  ಆದರೆ ನನ್ನ ಬಾಳಲ್ಲಿ ನೀನಿಲ್ಲ.


  • ಈ ಪ್ರೀತಿಯೆಂಬ ಕಾವು
  ಬೆಳೆಸಿದ್ದೆಲ್ಲಾ ನೋವು
  ಉಳಿಸಿದ್ದು ಬರೀ ಸಾವು..


  • ಮರೆಯಲಾಗದು ಈ ನನ್ನ ಭಾವ
  ಅಳಿಸಲಾಗದು ನನ್ನ ಈ ನೋವ
  ಉಳಿಸುವೆಯಾ ಓ ಪ್ರೀತಿ....
  ಈ ನನ್ನ ಜೀವ.......??
  No comments: