Friday, November 11, 2011

ಕನಸು- ಕಸ


ಕನಸುಗಳ್ಳಿಲ್ಲದ ಕವನ
ಮನಸುಗಳ್ಳೀಲ್ಲದ ಮಿಲನ
ಪ್ರಾಣವಿಲ್ಲದ ಪಯಣವಿದ್ದಂತೆ

ಪ್ರೀತಿಯಿಲ್ಲದ ಪ್ರಗತಿ
ಕಾರಣವಿಲ್ಲದ ಕರುಣೆ
ನೋಟವಿಲ್ಲದ ನಯನವಿದ್ದಂತೆ

ಸೆಳೆತವಿಲ್ಲದ ಕರುಳು
ಮಾನವತ್ವವಿಲ್ಲದ ಮಮತೆ
ತ್ರಾಣವಿಲ್ಲದ ತನುವಿದ್ದಂತೆ

ಕರುಣೆಯಿಲ್ಲದ ಕರುಳು
ಮಾನವತ್ವವಿಲ್ಲದ ಮನುಷ್ಯ್ಸ
ಕಳೆದುಹೋದ ಕಸವಿದ್ದಂತೆ

Tuesday, October 4, 2011

ಪ್ರೀತಿ-ಹೃದಯ


ಪ್ರೀತಿಸುವ ಹೃದಯ ಸತ್ತಿರುವಾಗ
ಪ್ರೀತಿ ಸಾಯದೇಕೆ....??

ನೀ ಜೀವಿಸಿದ್ದ ಮನವಿರುವಾಗ
ನೀ ಇಲ್ಲವೇಕೆ.......??

ನೀ ಕಂಡ ಕಂಗಳಿರುವಾಗ
ನೀ ಕಾಣುತ್ತಿಲ್ಲವೇಕೆ....??

ನಿನ್ನ ಕನಸುಗಳಿರುವ ರಾತ್ರಿಗಳಿರುವಾಗ
ನೀ ಕತ್ತಲಾದೆಯೇಕೆ.....??

ಆವಿಯಾಗಿದ್ದ ಮೋಡಗಳೆ ಮಳೆಯಾಗಿರುವಾಗ
ನೀ ನನ್ನ ತಣಿಸಲಿಲ್ಲವೇಕೆ...??

ನಿನ್ನ ಪ್ರೀತಿಯಿರದ ಈ ಜೀವ
ನನಗಿನ್ಯಾಕೆ.....??

Tuesday, July 26, 2011

"ಪ್ರೀತಿ ಮಾಡ್ಬೇಕು ಆದ್ರೆ ಗಲೀಜು ಮಾಡ್ಕೊಬಾರ್‍ದು......"


ಪ್ರೀತಿ....!!
         ಈ ಪದವೇ ಎಷ್ಟೊಂದು ಸುಂದರ..... ಸುಮಧುರ.... ವರ್ಣಿಸಲು ಪದಗಳೇ
 ಸಾಲದು. ಯುವಕ ಯುವತಿಯರಿಂದ ಮುದುಕರವರೆಗೂ ಹೃದಯ ಝಲ್ಲೆನಿಸುವಂತೆ 
ಮಾಡಲು ಈ ಪ್ರೀತಿಯೆಂಬ ಮಾಯೆಗೆ ಮಾತ್ರ ಸಾಧ್ಯ. ಸುಮಧುರ ಭಾವನೆ.... ಆಗಸದಲ್ಲೇ
ಹಾರಡುವ ಕಲ್ಪನೆ.... ಸಖ ಸಖಿಯರ ಉನ್ಮಾದ.... ಎಲ್ಲವೂ ಪ್ರೀತಿಯಲ್ಲಿ ಗಾಡವಾಗಿ
ಅಡಗಿವೆ.
       ಆದರೇ.....??
       ಇಂದಿನ ಯುವಕ ಯುವತಿಯರ ನಡುವೆ ಬೆಳೆಯುವ ಪ್ರೀತಿಯೆಂಬ ಪದದ ಭಾಂದವ್ಯ
ಮನಸ್ಸಿನಾಳದ ಭಾಂದವ್ಯವಾಗಿ ಉಳಿದಿಲ್ಲ. ಎಲ್ಲೊ ಕೆಲವರಲ್ಲಿ ಕೆಲವರು ನಿಜವಾದ 
ಪ್ರೀತಿಯಲ್ಲಿ ಮುಳುಗಿರುತ್ತಾರೆ.
      ಪ್ರೀತಿಯಲ್ಲಿ ಮುಳುಗಿರುವವನೇ ಜೀವನದಲ್ಲಿ ಈಜಬಲ್ಲನು ಎನ್ನುವುದು ನನ್ನ ಭಾವನೆ...
ಹೆಚ್ಹಿನವರು ಪ್ರೀತಿಯಲ್ಲಿ ಮುಳುಗಿದ್ದೇವೆ ಎಂಬ ಭಾವನೆಯಲ್ಲೇ ತೇಲುತ್ತಿರುತ್ತಾರೆ.... ಪ್ರೀತಿಗೆ 
ಅದರದ್ದೇ ಆದ ಮಹತ್ವವಿದೆ.... ಅದನ್ನು ಹೆಚ್ಚಿನವರು ಅರಿಯಲು ಸಾಧ್ಯವಾಗಿಲ್ಲ.
ಪ್ರೀತಿಯ ಹೆಸರಲ್ಲಿ ಹಲವಾರು ಜನರು ಮೋಸ ಹೋಗುತ್ತಿದ್ದಾರೆ. ತಮ್ಮ ಜೀವನವನ್ನೆ ನಾಶ
ಮಾಡಿಕೊಳ್ಳುತ್ತಿದ್ದಾರೆ.
        ಇದಕ್ಕೆ ಮುಖ್ಯ ಕಾರಣ ಪ್ರೀತಿಸುವ ಪದ್ದತಿ. ಇಂದಿನ ಹೆಚ್ಚಿನ ಯುವಕ ಯುವತಿಯರು
ಪ್ರೀತಿಯಲ್ಲಿ ಬೀಳುವ ಮುಂಚೆ ಪ್ರೀತಿಸುವವರಲ್ಲಿ ನೋಡುವುದು ಆರ್ಧಿಕತೆಯನ್ನು... ಪ್ರೀತಿಯಲ್ಲಿ
ಇರುವವರೂ ಕೂಡ ಇನ್ನೂ ಹೆಚ್ಚಿನ ಆರ್ಧಿಕ ಬಲವುಳ್ಳವರು ಪ್ರೀತಿಯನ್ನು ಬಯಸಿದರೆ ಅವರ ಕಡೆ
ವಾಲುತ್ತಾರೆ. ಇನ್ನು ಕೆಲವರದ್ದು ಪ್ರೀತಿಯೆಂಬ ಪದದ ಮತ್ತು ಭಾವನೆಯ ಅರ್ಥವೇ ತಿಳಿಯದ
ಹುಚ್ಚಾಟ. ಇಂದು ಒಬ್ಬರು ನಾಳೆ ಇನ್ನೊಬ್ಬರು....
      ಇಂದಿನ ಸಮಾಜಕ್ಕೆ ಬೇಕಾಗಿರುವ ಹಣವೆಂಬ ಭೂತವೊಂದಿದ್ದರೆ ಸಾಕು ಅದರಿಂದ 
ಮೋಜು ,ಮೋಜಿನಿಂದ ಸಂತೋಷ , ಸಂತೋಷದಿಂದ ಪ್ರೀತಿ ಸಿಗುತ್ತದೆ ಎಂಬ ಕನಸ್ಸಿನಲ್ಲಿ
ಹೆಚ್ಚಿನವರು ಮೈಮರೆತಿದ್ದಾರೆ. ಹೆಚ್ಚಿನವರು ಇದನ್ನೇ ಒಂದು ಉದ್ಯೊಗವನ್ನಾಗಿ 
ಮಾಡಿಕೊಂಡಿದ್ದಾರೆ. ಇಂದಿನವರು ಪ್ರೀತಿಸುವ ಪದ್ದತಿ ಹೇಗಿದೆಯೆಂದರೆ
"Heart for sale"
"Heart for Rent" ಎನ್ನುವಂತಿದೆ.


         ನಿನ್ನಲ್ಲಿ ಹಣವಿದೆಯೇ....??
ಹಾಗಾದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುವವರು ಬಹಳ.... ನಿಜವಾದ ಪ್ರೀತಿಗೆ
ಅರ್ಥ ನೀಡುವವರು ವಿರಳ. ಇಂದು ವ್ಯವಹಾರಿಕ ಪ್ರೀತಿ ಹೆಚ್ಚಾಗಿದೆ... ಪ್ರೀತಿಯಲ್ಲಿ ಹೆಚ್ಚಿನವರು
ದೈಹಿಕವಾಗಿ ಪಾವಿತ್ರವನ್ನು ಕಳೆದುಕೊಳ್ಳುತ್ತಿದ್ದಾರೆ.... ಅದಕ್ಕಾಗಿ ಪ್ರೀತಿಯ ಅರ್ಥವನ್ನು
ಸರಿಯಾಗಿ ತಿಳಿದು ಅದನ್ನು ಅನುಭವಿಸಬೇಕು.
      "ಪ್ರೀತಿ ಮಾಡ್ಬೇಕು ಆದ್ರೆ ಗಲೀಜು ಮಾಡ್ಕೊಬಾರ್‍ದು......"

Thursday, July 14, 2011

ನಿನ್ನ ಹೃದಯದಲ್ಲಿಲ್ಲವೇ ನಾನು.......??

ನನ್ನೊಳು ಒಂದು ಮನಸು
ಮನಸಿನೊಳು ಒಂದು ಕನಸು
ಆ ಕನಸಿನೊಳು........?? ನೀನು.....!!

ನೀನೆಂಬುದು ಕನಸು
ನಿನ್ನ ಮನಸಿಗೀಗ ಮುನಿಸು
ತಣ್ಣಗಾದರೆ ತಿಳಿಸು ,ಇಲ್ಲವಾದರೆ ಅಳಿಸು...

ನಿನ್ನಲ್ಲಿ ನಾನು
ನನ್ನ ಮನದಲ್ಲಿ ನೀನು
ಬೆಸೆದಿಲ್ಲವೇನು...?? ಪ್ರೀತಿಯೆಂಬ ಜೇನು...

ನನ್ನ ಕಣ್ಣಲ್ಲಿ ನೀನು
ನನ್ನೀ ಪ್ರೀತಿಯನ್ನು ಕಾಣು
ನಿನ್ನ ಹೃದಯದಲ್ಲಿಲ್ಲವೇ ನಾನು.......??

ನೀ ಮರೆತಿರುವ ಹೃದಯವಿದು...

ದೇಹ ಮಾಡಿದ್ದೆಲ್ಲಾ ಮಣ್ಣಿಗೆ
ಮನಸು ಮಡಿದ್ದೆಲ್ಲಾ ಕಣ್ಣೀರಿಗೆ
ನನ್ನಲ್ಲಿ ನಾನೇ ಇಲ್ಲ ಇಂದಿಗೆ....

ಜೀವ ಹಾರಬಹುದು ಮೆಲ್ಲಗೆ
ನಾನು ಬದುಕಿರಬಹುದು ಸುಮ್ಮಗೆ(ನೆ)
ಪ್ರೀತಿಯೇ ಇಲ್ಲ ಈ ಬದುಕಿಗೆ....

ಸಣ್ಣ ಆಸೆಗಳಿರುವ ಮನಸಿದು
ಬಣ್ಣ ಮಾಸಿರುವ ಕನಸಿದು
ನೀ ಮರೆತಿರುವ ಹೃದಯವಿದು...

ಜೀವವಿಲ್ಲದ ನನ್ನ ಕನಸಿಗೆ
ತ್ರಾಣವಿಲ್ಲದ ಈ ಮನಸಿಗೆ
ಜೀವವಿಡು ನೀ ಬಂದು ನನ್ನಲ್ಲಿಗೆ...

ಪ್ರೀತಿಯ ಬಯಸಿದೆ ನಿನ್ನಲ್ಲಿ
ನೀ ಇಲ್ಲವಾಗಿಸಿದೆ ಕ್ಷಣದಲ್ಲಿ
ನಾನಿಲ್ಲವೆ ನಿನ್ನ ಮನದಲ್ಲಿ....??

Wednesday, March 9, 2011

ನನ್ನ ಬಾಳು ನನ್ನದೇ.......??



ನಾ ಕಾಣುವ ಕನಸು ನನ್ನದಲ್ಲ.....
ನಾ ಕಾಣುವ ಕನಸಿನ ಬಣ್ಣ ನನ್ನದಲ್ಲ.....
ಓ ಜೀವ ಈ ಬಾಳು ನನ್ನದೇ......??
ನಿನ್ನ ಕನಸು ನಿನ್ನವೇ.....??
ನೀ ನಡೆವ ದಾರಿ ನಿನ್ನದೇ.....??

ಯಾರೋ ಬಯಸಿದ ದಾರಿ ನಿನ್ನದು....
ಯಾರೋ ಬದುಕಿ ಬಿಸುಟ ಬಾಳು ನಿನ್ನದು...
ನಿನ್ನ ಕನಸಿಗೆ ಬಣ್ಣ ಬಳಿದವರ್‍ಯಾರೋ.....??
ಯಾರದೋ ಬಣ್ಣಕ್ಕೆ ನಿನ್ನ ಕನಸು......

ಬಯಕೆಗಳ ಬಾಳಿಗೆ ಕನಸ್ಸಲ್ಲೂ ದಾರಿ ಇಲ್ಲ...
ತನು ನಿನ್ನದೇ.... ಆದರೆ ಮನ....??
ಮನದ ಆಸೆ... ಬಣ್ಣವಿಲ್ಲದ ಕನಸೇ....
ನಿನಗೆ ಇಷ್ಟು ಸಾಕೇ.....??

ನಿನ್ನನ್ನು ಕಂಡರೆ ಕಟ್ಟುಪಾಡುಗಳಿಗೆ ಮೋಹ...
ಆಸೆಗಳು ನೂರಾರು.... ಕನಸುಗಳು ಸಾವಿರಾರು..
ದಾರಿಗಳು ಹಲವಾರು... ಆದರೇ.....??
ನಿನ್ನ ಹೆಜ್ಜೆಗಳು ನಿನ್ನ ಬಳಿ ಇಲ್ಲ.....
ಯಾರದೋ ತಾಳಕ್ಕೆ ಕುಣಿವ ನಿನ್ನ ಕನಸುಗಳು...

ನಿನಗೆ ಸ್ವಾಭಿಮಾನವಿಲ್ಲವೇ....??
ಸ್ವಾಭಿಮಾನ....!! ನಿನಗೆಲ್ಲಿಂದ ಬರಬೇಕು....??
ಬೇರೆಯವರ ಆಸೆಗಳಿಗೆ ಅಂಟಿಕೊಂಡ ನಿನಗೆ
ಸ್ವಾಭಿಮಾನದ ಸುಳಿವೆಲ್ಲಿ.....??
ಈ ನಿನ್ನ ಬಾಳು ನಿನ್ನದೆ....??